ರಾಬರ್ಟ್‍ರೆಡ್‍ಫೀಲ್ಡ್ 1897 - 1958.  ಅಮೆರಿಕದ ಪ್ರಸಿದ್ಧ ಮಾನವಶಾಸ್ತ್ರಜ್ಞ. ಜನಪದ ಸಮಾಜ, ಕಿರುಸಮುದಾಯ, ಜನಪದ - ನಗರ ಸಾಹಿತ್ಯಗಳನ್ನು ನೀಡಿದವನು. 4-12-1897 ರಂದು ಷಿಕಾಗೊದಲ್ಲಿ ಜನಿಸಿದ. ಷಿಕಾಗೋ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಮಾಡಿ 1921ರಲ್ಲಿ ಕಾನೂನು ಪದವಿಗಳಿಸಿದ. ಕಾನೂನು ಪದವಿಗಳಿಸುವ ಮುನ್ನ ಈತ ಕೆಲಕಾಲ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವವಿe್ಞÁನ ಅಭ್ಯಾಸ ಮಾಡಿದ್ದ. 1920ರಲ್ಲಿ ಮಾರ್ಗರೇಟ್ ಲೂಸಿಪಾರ್ಕ್ ಎಂಬಾಕೆಯನ್ನು ವಿವಾಹವಾದ. ಈಕೆ ಷಿಕಾಗೊದ ಸಮಾಜ ಶಾಸ್ತ್ರಜ್ಞ ರಾಬರ್ಟ್ ಪಾರ್ಕ್‍ನ ಮಗಳು. ರೆಡ್‍ಫೀಲ್ಡ್‍ನ ತಂದೆ ಷಿಕಾಗೊದಲ್ಲಿ ಸುಪ್ರಸಿದ್ಧ ನ್ಯಾಯವಾದಿಯಾಗಿದ್ದ. ಹಾಗಾಗಿ ಈತ ಕಾನೂನಿನಲ್ಲಿ ಪದವಿಗಳಿಸಿದ ಮೇಲೆ ತನ್ನ ತಂದೆಯ ಸಂಸ್ಥೆಯೊಂದರಲ್ಲಿ ವಕೀಲನಾಗಿವೃತ್ತಿ ಜೀವನವನ್ನು ಆರಂಭಿಸಿದ. ಆದರೆ ಈ ವೃತ್ತಿಜೀವನ ಈತನಿಗೆ ತೃಪ್ತಿ ತರಲಿಲ್ಲ. 1923ರಲ್ಲಿ ಈತ ತನ್ನ ಪತ್ನಿಯೊಡನೆ ಮೆಕ್ಸಿಕೊಗೆ ಭೇಟಿ ಕೊಟ್ಟ. ಈ ಸಂದರ್ಭದಲ್ಲಿ ಪುನರುತ್ಥಾಗೊಳ್ಳುತ್ತಿದ್ದ ಮೆಕ್ಸಿಕನ್ ಸಂಸ್ಕøತಿಯ ದರ್ಶನ ಇವನಿಗಾಯಿತು. ಜೊತೆಗೆ ಅಲ್ಲಿಯ ಸಮಾಜ ಸುಧಾರಕ ಮತ್ತು ಮಾನವಕುಲಶಾಸ್ತ್ರಜ್ಞನಾದ ಮ್ಯಾನ್ಯುಯಲ್‍ಗಾಮಿಯೊ ಎಂಬವನ ಕೆಲಸಕಾರ್ಯಗಳು ಇವನ ಗಮನಸೆಳೆದವು. ಮಾನವಶಾಸ್ತ್ರ ವಿಷಯದ ಬಗ್ಗೆ ಆಸಕ್ತಿ ಮೂಡಿಸಿತು. ಷಿಕಾಗೊಗೆ ಮರಳಿದ ಅನಂತರದ ತನ್ನ ಮಾವ ರಾಬರ್ಟ್ ಪಾರ್ಕ್‍ನ ಪ್ರೋತ್ಸಾಹದಿಂದ ಮಾನವಶಾಸ್ತ್ರ ಅಧ್ಯಯನದಲ್ಲಿ ತೊಡಗಿದ. 1926ರಲ್ಲಿ ಈತ ಮೆಕ್ಸಿಕೊಗೆ ಹೋಗಿ ಟೆಪಾಜ್‍ಲಾಲ್ ಅಜ್‍ಟೆಕ್ ಸಮುದಾಯವೊಂದನ್ನು ಕುರಿತು ಕ್ಷೇತ್ರಕಾರ್ಯಕೈಗೊಂಡ. ಮುಂದೆ ಈ ಕ್ಷೇತ್ರಕಾರ್ಯದ ಫಲವಾಗಿ ಟೆಪಾಜ್‍ಲಾನ್ ಎಂಬ ಕೃತಿಯನ್ನು ಪ್ರಕಟಿಸಿದ (1930). ಇದು ಇವನಿಗೆ ಮಾನವಶಾಸ್ತ್ರ ಕ್ಷೇತ್ರದಲ್ಲಿ ಅಪಾರ ಕೀರ್ತಿ ತಂದುಕೊಟ್ಟಿತು.

ಈತ 1927ರಲ್ಲಿ ಷಿಕಾಗೊ ವಿಶ್ವವಿದ್ಯಾಲಯವನ್ನು ಸೇರಿದ. 1928ರಲ್ಲಿ ಪಿ. ಎಚ್. ಡಿ. ಪದವಿ ಗಳಿಸಿದ. 1927 - 58 ರ ನತಕ ಈತ ಷಿಕಾಗೊ ವಿಶ್ವವಿದ್ಯಾಲಯದೊಡನೆ ಅನೇಕ ಬಗೆಯಲ್ಲಿ ನಿಕಟ ಸಂಪರ್ಕ ಇಟ್ಟುಕೊಂಡಿದ್ದ. 1930ರಲ್ಲಿ ವಾಷಿಂಗ್ಟನ್ನಿನಲ್ಲಿ ಕಾರ್ನೆಗಿ ಸಂಸ್ಥೆ ಇವನನ್ನು ಸಂಶೋಧನ ಸಹಾಯಕನನ್ನಾಗಿ ನೇಮಿಸಿತು. ಮುಂದೆ ಈತ ಸುಮಾರು 16 ವರ್ಷಗಳ ಕಾಲ ಯುಕಾಟಾನ್ ಹಾಗೂ ಗ್ವಾಟೆಮಾಲಾಗಳಲ್ಲಿ ಕ್ಷೇತ್ರಕಾರ್ಯನಡೆಸಿದ; ಅನೇಕ ಕೃತಿಗಳನ್ನು ಪ್ರಕಟಿಸಿದ. ಮಾನವಶಾಸ್ತ್ರದ ಪ್ರಾಧ್ಯಾಪಕನಾಗಿ, ಸಾಮಾಜಿಕ ವಿe್ಞÁನ ವಿಭಾಗದ ಡೀನ್ ಆಗಿ ಈತ ಷಿಕಾಗೊ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು.

ರೆಡ್‍ಫೀಲ್ಡ್ ವರ್ಣಿಸುವ ಜನಪದ ಸಮಾಜ ಚಿಕ್ಕಗಾತ್ರದ, ಪ್ರತ್ಯೇಕವಾಗುಳಿದ, ಅನಕ್ಷರಸ್ಥರಿಂದ ಕೂಡಿದ, ಸಮಾನ ಗುಣಲಕ್ಷಣವುಳ್ಳ ಮತ್ತು ಬಲವಾದ ಏಕತಾ ಭಾವನೆಯಿರುವ ಸಮಾಜ, ಪರಂಪರಾನುಗತ ವರ್ತನೆ, ಬಂದು - ಬಳಗದ ಪ್ರಾಬಲ್ಯ, ಲೌಕಿಕಕ್ಕಿಂತ ಧಾರ್ಮಿಕಕ್ಕೆ ಹೆಚ್ಚು ಮರ್ಯಾದೆ, ಮಾರುಕಟ್ಟೆಗಳಿಲ್ಲದ ಸರಳ ಆರ್ಥಿಕತೆ, ಸ್ಥಾನಮಾನಕ್ಕೆ ಎಲ್ಲಿಲ್ಲದ ಗೌರವ, ಕಾಯ್ದೆಗಳ ಬದಲು ರೂಢಿಗಳ ಬಳಕೆ - ಇವೆಲ್ಲಾ ಅದರ ಪ್ರಮುಖ ಲಕ್ಷಣಗಳು. ದಿ ಲಿಟ್ಲ್ ಕಮ್ಯುನಿಟಿ (1955) ಗ್ರಂಥದಲ್ಲಿ ಈ ಗುಂಪಿಗೆ ಸೇರಿದ ಕಿರು ಸಮುದಾಯಗಳನ್ನು ಈತ ವರ್ಣಿಸಿದ್ದಾನೆ. ಭೌಗೋಳಿಕವಾಗಿ ಗುರುತಿಸಬಲ್ಲ ವೈಶಿಷ್ಟ್ಯ ಸಮುದಾಯದ ಜನರು ಪರಸ್ಪರರನ್ನು ಸುಲಭವಾಗಿ ಗುರುತಿಸಲು ಅನುಕೂಲವೆನಿಸುವ ಕಿರಿಯಗಾತ್ರ, ಜನರಲ್ಲಿ ಮತ್ತು ಅವರ ಕಾರ್ಯಚಟುವಟಿಕೆಗಳಲ್ಲಿ ಸಮರೂಪತೆ, ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಆವಶ್ಯಕತೆಗಳನ್ನು ಪೂರೈಸಿಕೊಳ್ಳವಂಥ ಸ್ವಯಂ ಪರಿಪೂರ್ಣತೆ ಈ ನಾಲ್ಕು ಲಕ್ಷಣಗಳು ಕಿರುಸಮುದಾಯದ ವಿಶೇಷತೆಗಳು, ಆದರೆ ರೆಡ್‍ಫೀಲ್ಡ್‍ನ ಟೀಕಾಕಾರರು ಈ ವಿಚಾರಗಳನ್ನು ಸರಳೀಕೃತ ವರ್ಣನೆಗಳೆಂದಿದ್ದಾರೆ. ಸ್ವತಃ ರೆಡ್‍ಫೀಲ್ಡ್ ತಾನು ಅಧ್ಯಯನದ ಅನುಕೂಲಕ್ಕಾಗಿ ಸರಳೀಕೃತ ಆದರ್ಶರೂಪವನ್ನು ಬಳಸಿದ್ದಾಗಿ ಹೇಳಿದ್ದಾನೆ. ಎಲ್ಲ ಕಿರು ಸಮುದಾಯಗಳೂ ಕಾಲಕ್ರಮೇಣ ಸಾಮಾಜಿಕ ಪರಿವರ್ತನೆ ಹಾಗೂ ಸಾಂಸ್ಕøತಿಕ ವಿಘಟನೆಯ ಪ್ರಕ್ರಿಯೆಗಳಿಗೆ ಒಳಗಾಗಬಹುದೆಂದಿದ್ದಾನೆ.+

ಈತ ಹೇಳಿದ ಜನಪದ - ನಗರ ಸಾಹಿತ್ಯ ಗಮನಾರ್ಹವಾದುದಾಗಿದೆ. ತನ್ನ ಯುಕ್‍ಟಾನ್ (1941) ಅಧ್ಯಯನದಲ್ಲಿ ಒಂದು ರಾಜಧಾನಿನಗರ, ಒಂದು ರೈಲು ನಿಲ್ದಾಣವಿರುವ, ಒಂದು ರೈತಾಪಿಗ್ರಾಮ ಮತ್ತು ಕಾಡಿನ ನಡುವಿನ ಒಂದು ಆದಿವಾಸಿ ನೆಲೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಆ ನೆಲೆಯಿಂದ ಈ ನೆಲೆಯವರೆಗಿನ ಸಾಹಿತ್ಯವನ್ನು ಗುರುತಿಸಿದ್ದಾನೆ. ಅಲ್ಲದೆ ಜನಪದ ಮತ್ತು ಗಮನ ಸೆಳೆದಿದ್ದಾನೆ. ಈತ ಚೀನ ಮತ್ತು ಭಾರತವನ್ನು ಸಂದರ್ಶಿಸಿದಾಗ ತನಗೆ ಮಹಾಸಂಸ್ಕøತಿ ಹಾಗೂ ಸ್ಥಳೀಯ ಕಿರುಸಂಪ್ರದಾಯಗಳ ಪರಿಕಲ್ಪನೆ ಪರಸ್ಪರ ಪ್ರಭಾವ ಬೀರುತ್ತವೆಂದೂ ಅದರಲ್ಲೂ ಮಹಾಸಂಸ್ಕøತಿ ಕಿರುಸಂಸ್ಕøತಿಯ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದೂ ನಿರೂಪಿಸಿದ.

ನಾಗರಿಕತೆ - ಸಮಾಜದ ಅಧ್ಯಯನವನ್ನು ನಾವು ಒಬ್ಬ ವ್ಯಕ್ತಿ. ಒಂದು ಸಮುದಾಯ. ದೇಶ ಹೀಗೆ ಎಲ್ಲಿಂದಲೂ ಪ್ರಾರಂಭಿಸಬಹುದು ಎಂದು ಹೇಳಿದ್ದು ಈತನ ಇನ್ನೊಂದು ಗಮನೀಯ ವಿಚಾರ. ಆದರೆ ಸರಳ ಮತ್ತು ಸಮಗ್ರ ಘಟಕವಾದ ಸಮುದಾಯದಿಂದ ಪ್ರಾರಂಭಿಸುವುದು ಉತ್ತಮವೆಂದು ಅಭಿಪ್ರಾಯಪಟ್ಟ. ಈ ಭಾವನೆಯಿಂದ ಪ್ರೇರಿತನಾಗಿ ಇವನು ವಿವಿಧ ದೇಶಗಳ ಬಗ್ಗೆ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ. ಈತ ವಿಲ್ಟನ್ ಸಿಂಗರೊಡನೆ ಭಾರತ ಕುರಿತು ಏರ್ಪಡಿಸಿದ ವಿಚಾರ ಸಂಕಿರಣದ ಪ್ರಬಂಧಗಳು ಅನಂತರದ ಮೆಕಿಮ್ ಮ್ಯಾರಿಯೆಟ್‍ನ ಸಂಪಾದಕತ್ವದಲ್ಲಿ ವಿಲೇಜ್ ಇಂಡಿಯ (1955) ಎಂಬ ಗ್ರಂಥರೂಪದಲ್ಲಿ ಪ್ರಕಟವಾಗಿ ಭಾರತದಲ್ಲಿ ಗ್ರಾಮಾಧ್ಯಾಯನಗಳ ದೊಡ್ಡ ಪರಂಪರೆಗೆ ನಾಂದಿಯಾದವು.
ಈತ ಮಾನವಶಾಸ್ತ್ರಕ್ಕೆ ಸಂಬಂಧಿಸಿದಂತೆ ಕೃತಿಗಳನ್ನು ಪ್ರಕಟಿಸಿದ್ದಾನೆ. ಆಗಿನ ಕಾಲದ ಮಾನವಶಾಸ್ತ್ರಜ್ಞರು ನಾಗರಿಕತೆಯಿಂದ ದೂರ ಉಳಿದ, ಆದಿವಾಸಿ ಪಂಗಡಗಳ ಅಧ್ಯಯನದಲ್ಲಿ ತೊಡಗಿದ್ದರೆ ಈತ ಜನಪದದಿಂದ ನಗರಪದಕ್ಕೆ (ನಾಗರೀಕತೆಗೆ) ಸ್ಥಿತ್ಯಂತರಗೊಳ್ಳುತ್ತಿದ್ದ ರೈತಾಪಿ ಸಮುದಾಯಗಳ ಸಾಂಸ್ಕøತಿಕ ಸಾಮಾಜಿಕ ಬದಲಾವಣೆಗಳ ತೌಲನಿಕ ಅಧ್ಯಯನದಲ್ಲಿ ಪ್ರಧಾನ ಆಸಕ್ತಿವಹಿಸಿದ್ದ. ಟೆಪಾಜ್‍ಲಾನ್, ಎ ಮೆಕ್ಸಿಕನ್ ವಿಲೇಜ್; ಎ ಸ್ಟಡಿ ಆಫ್ ಫೋಕ್ ಲೈಫ್ (1930) ದಿ ಪೋಕ್ ಕಲ್ಚರ್ ಆಫ್ ಯುಕಾಟಾನ್ (1941) ಜಾನ್ ಕೋಮ್; ಎ ಮಾಯ ವಿಲೇಜ್ (1934), ವಿಲ್ಲಾರೋಜಸ್ ಎಂಬವನ ಸಹಯೋಗದೊಡನೆ), ಎ ವಿಲೇಜ್ ದಟ್ ಚೋಸ್ ಪ್ರೋಗ್ರಸ್ (1950), ದಿ ಪ್ರಿಮಿಟಿವ್ ವಲ್ರ್ಡ್ ಅಂಡ್ ಇಟ್ಸ್ ಟ್ರಾನ್ಸ್‍ಫಾರ್ಮೆಷನ್ಸ್ (1953), ದಿ ಲಿಟ್ಲ್ ಕಮ್ಯುನಿಟಿ (1955 ಪೆಸೆಂಟ್ ಸೊಸೈಟಿ ಅಂಡ್ ಕಲ್ಚರ್; ಎನ್ ಆಂತ್ರೋಪಾಲಜಿಕಲ್ ಅಪ್ರೋಚ್ ಟು ಸಿವಿಲೈಸೇಷನ್ (1956) - ಇವು ಇವನ ಮುಖ್ಯ ಕೃತಿಗಳು. ಇವನ ಸಂಶೋಧನಾತ್ಮಕ ಬಿಡಿ ಬರೆಹಗಳನ್ನು ಈತನ ಪತ್ನಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾಳೆ (1963 - 63, ಹ್ಯೂಮನ್ ನೇಚರ್ ಅಂಡ್ ಸ್ಟಡಿ ಆಫ್ ಸೊಸೈಟಿ - ಸಂಪುಟ 1, ದಿ ಸೋಷಿಯಲ್ ಯೂಸಸ್ ಆಫ್ ಸೋಷಿಯಲ್ ಸೈನ್ಸ್ - ಸಂಪುಟ 2).							
(ಪಿ.ಎನ್.ಎಚ್.; ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ